ಝೀಲಂಡ್
ನೆದರ್‍ಲಂಡ್ಸ್‍ನ ಅತ್ಯಂತ ದಕ್ಷಿಣದ ಕರಾವಳಿ ಪ್ರಾಂತ್ಯ.  ಉತ್ತರ ಸಮುದ್ರ ತೀರದ ಹಲವು ದ್ವೀಪಗಳನ್ನೂ ಸ್ಕೆಲ್ಡ ಅಳಿವೆಯ ದಕ್ಷಿಣದ ಭೂಪ್ರದೇಶದ ಒಂದು ಭಾಗವನ್ನೂ ಒಳಗೊಂಡಿದೆ.  ಷೌವೆನ್-ಡಾಯ್‍ವಲಾಂಟ್, ಟೋಲನ್, ಉತ್ತರ ಬೇವಲಾಂಟ್, ವಾಲ್‍ಕರನ್, ದಕ್ಷಿಣ ಬೇವಲಾಂಟ್, ಸೇಂಟ್ ಫಿಲಿಫ್ಸ್‍ಲಾಂಟ್-ಇವು ಈ ಪ್ರಾಂತ್ಯದ ದ್ವೀಪಗಳು.  ಈ ಎಲ್ಲ ದ್ವೀಪಗಳಿಗೂ ಪರಸ್ಪರವಾಗಿ ಅಥವಾ ಮುಖ್ಯ ಭೂಪ್ರದೇಶದೊಂದಿಗೆ ಕಟ್ಟೆಗಳ ಅಥವ ಸೇತುವೆಗಳ ಮೂಲಕ ಸಂಬಂಧ ಏರ್ಪಟ್ಟಿರುವುದರಿಂದ ಇವು ಸಂಪೂರ್ಣ ದ್ವೀಪಲಕ್ಷಣಗಳಿಂದ ಕೂಡಿಲ್ಲ.  ಜಿóೀಲಂಡಿನ ಒಟ್ಟು ವಿಸ್ತೀರ್ಣ 1,042 ಚ.ಮೈ. (2,700 ಚ.ಕಿಮೀ.)  ಜನಸಂಖ್ಯೆ 3,05,754 (1970).  ಆಡಳಿತ ಕೇಂದ್ರ ಮಿಡ್ಲ್‍ಬರ್ಗ್.

	ಜಿóೀಲಂಡಿನ ಬಹು ಭಾಗ ಸಮುದ್ರ ಮಟ್ಟಕ್ಕಿಂತ ತಗ್ಗು.  ಆದ್ದರಿಂದ ಕಟ್ಟೆಗಳನ್ನು ಕಟ್ಟಿ ಪ್ರಾಂತ್ಯದ ದ್ವೀಪಗಳನ್ನು ಹಾಗೂ ತೀರಪ್ರದೇಶಗಳನ್ನು ಸಮುದ್ರದಿಂದ ರಕ್ಷಿಸುವ ಕೆಲಸ ಬಹಳ ಕಾಲದಿಂದ ಸಾಗಿಬಂದಿದೆ.  ಇಲ್ಲಿಯದು ಸಾಗರಿಕ ವಾಯುಗುಣ.  ಬೇಸಗೆ ಹಿತಕರ.  ಶೀತಕಾಲದಲ್ಲಿ ಸಮಶೀತೋಷ್ಣ ವಲಯಕ್ಕೆ ಅನುಗುಣವಾದ ಚಳಿ.  ಸರಾಸರಿ ಉಷ್ಣತೆ ಜನವರಿಯಲ್ಲಿ 36ಲಿಈ : ಜುಲೈಯಲ್ಲಿ 66ಲಿ ಈ .  ವಾರ್ಷಿಕ ಸರಾಸರಿ ಉಷ್ಣತೆ 50ಲಿಈ.  ಚಳಿಗಾಲದಲ್ಲಿ ಮಂಜು ಹಾಗೂ ಆಗಾಗ್ಗೆ ಮಳೆ ಬೀಳುತ್ತದೆ.  ವಾರ್ಷಿಕ ಸರಾಸರಿ ಅವಪತನ 27”.
ಇಲ್ಲಿಯ ಸಸ್ಯ ಮತ್ತು ಪ್ರಾಣಿಗಳು ಸಮಶೀತೋಷ್ಣ ವಲಯದವು.  ಓಕ್, ಎಲ್ಮ್, ಪೈನ್, ಲಿಂಡೆನ್ ಮತ್ತು ಬೀಚ್ ಮರಗಳು ಅಧಿಕ.  ಪಶ್ಚಿಮ ಮತ್ತು ಮಧ್ಯ ಯೂರೋಪಿನ ಪಕ್ಷಿಗಳಿವೆ.  ತೀರಗಳಲ್ಲಿ ಕಡಲಬಾತುಗಳ ಹಿಂಡುಗಳುಂಟು.  ಈ ಪ್ರಾಂತ್ಯ ವಿವಿಧ ಪುಷ್ಪಗಳಿಗೆ ಹೆಸರಾಗಿದೆ.  ಉತ್ತರ ಸಮುದ್ರದ ಅಂಚು, ಸರೋವರ ಮತ್ತು ನದಿಗಳಲ್ಲಿ ಹಲವು ಬಗೆಯ ಮೀನುಗಳುಂಟು. ತೋಳಗಳ ವಿನಾ ಹಿಂದಿನ ವನ್ಯಮೃಗಗಳು ನಾಶವಾಗಿವೆ.
ಇಲ್ಲಿರುವ ಜನ ಫ್ರಾಕರು, ಸ್ಯಾಕ್ಸನ್ನರು ಮತ್ತು ಫ್ರೀಷಿಯನರು. ಭಾಷೆ ಡಚ್. ಸೆಕೆಂಡರಿ ಶಾಲೆಗಳಲ್ಲಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಗೆಸಲಾಗುತ್ತದೆ.  ಜನರ ಮುಖ್ಯ ಕಸಬು ಪಶುಪಾಲನೆ, ವ್ಯವಸಾಯ, ಬೆಳೆಗಳು ಗೋದಿ, ಬಾರ್ಲಿ, ಓಟ್ಸ್, ಆಲೂಗಡ್ಡೆ, ಗೆಣಸು, ಸಣಬು, ಈರುಳ್ಳಿ.  ದಕ್ಷಿಣ ಡೂವಲಾಂಬ್, ಜೀಲಂಡಿನ ಹಣ್ಣಿನ ತೋಟ.  ಇಲ್ಲಿ ದೊಡ್ಡ ಕೈಗಾರಿಕೆಗಳು ಕಡಿಮೆ.  ಮೀನುಗಾರಿಕೆಯ ಅಂಗವಾಗಿ ಮಸ್‍ಲ್ ಮತ್ತು ಆಯ್‍ಸ್ಟರುಗಳನ್ನು  ಕವೀಷವಾಗಿ ಸಾಕುತ್ತಾರೆ.  ಮೀನುಗಾರಿಕೆ ಪಟ್ಟಣಗಳು ಎರ್ಸೆಕ್ ಬ್ರುನಿಸ್ಸೀ ಫಿಲಿಪೀನ್, ಟೆನ್ರ್ಯುಜೆನ್ ಮತ್ತು ಹೌಂಟೆನಿಸ್ಸೀ.   
ಜೀಲಂಡಿನ ನಾನಾ ಭಾಗಗಳ ನಡುವೆ ಹಡಗು ಸಂಚಾರವುಂಟು.  ರೂಸೆಂಡಾಲ್ ನಿಂದ ದಕ್ಷಿಣ ಬೇವಲಾಂಟ್ ಮೂಲಕ ಮಿಡ್ಲ್‍ಬರ್ಗ್ ಮತ್ತು ಫ್ಲಷಿಂಗ್ ನಗರಗಳಿಗೆ ರೈಲುಮಾರ್ಗವಿದೆ.  ಸಮುದ್ರತೀರದ ಆರೋಗ್ಯಧಾಮ ಹಾಗೂ ಪ್ರವಾಸಿ ಸ್ಥಳಗಳು ರೆನಸ್ಸೀ, ಹಾಮ್‍ಸ್ಟೀಡ್ ಮತ್ತು ಬರ್ಗ್.
(ವಿ.ಜೆ.ಕೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ